Mahindra: ಈ ಅದ್ಭುತ ವಾಹನಗಳ ಮೇಲೆ 81,500 ರೂ. ವರೆಗೆ ಡಿಸ್ಕೌಂಟ್ ಲಭ್ಯ, ಈ ಅವಕಾಶ ಕಳೆದುಕೊಳ್ಳಬೇಡಿ!

                     

Deepawali Offer: ಹಬ್ಬದ ಋತುವಿನಲ್ಲಿ ದೀಪಾವಳಿಗೆ ಮುಂಚಿತವಾಗಿ, ಆಟೋಮೊಬೈಲ್ ಕಂಪನಿಗಳು  ರಿಯಾಯಿತಿಗಳು ಮತ್ತು ಪ್ರಯೋಜನಗಳ ಯೋಜನೆಗಳನ್ನು ನೀಡುವ ಮೂಲಕ ತಮ್ಮ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿವೆ. ಈ ಸಂಚಿಕೆಯಲ್ಲಿ, ಮಹೀಂದ್ರಾ & ಮಹೀಂದ್ರಾ (Mahindra & Mahindra) ತನ್ನ ನಾಲ್ಕು ಚಕ್ರದ ವಾಹನಗಳಲ್ಲಿ 81,500 ರೂ. ವರೆಗಿನ ರಿಯಾಯಿತಿಯನ್ನು ಘೋಷಿಸಿದೆ. ಪ್ರಸ್ತುತ, ಈ ಕೊಡುಗೆ 31 ಅಕ್ಟೋಬರ್ ವರೆಗೆ ಮಾತ್ರ ಲಭ್ಯವಿದೆ. ಯಾವ ಮಾದರಿಯಲ್ಲಿ ಎಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಕಂಪನಿಯು ಮಹೀಂದ್ರ ಸ್ಕಾರ್ಪಿಯೋ (Mahindra Scorpio) ಮೇಲೆ 22,320 ರೂ.ಗಳವರೆಗೆ ರಿಯಾಯಿತಿ ನೀಡಿದೆ. ಈ ರಿಯಾಯಿತಿಯು ರೂ. 5000 ವಿನಿಮಯ ಬೋನಸ್, ರೂ. 4000 ವರೆಗಿನ ಕಾರ್ಪೊರೇಟ್ ರಿಯಾಯಿತಿ ಮತ್ತು ರೂ .13,320 ರವರೆಗಿನ ಹೆಚ್ಚುವರಿ ಕೊಡುಗೆಗಳನ್ನು ಒಳಗೊಂಡಿದೆ. ಗಮನಿಸಬೇಕಾದ ಸಂಗತಿಯೆಂದರೆ ಈ ವಾಹನದ ಬೆಲೆ ರೂ 12.77 ಲಕ್ಷದಿಂದ ರೂ. 17.62 ಲಕ್ಷದವರೆಗೆ ಇರುತ್ತದೆ.  

2 /6

ಈ ಮಾದರಿಯ XUV300 ಮೇಲೆ ಮಹೀಂದ್ರಾ ಒಟ್ಟು 44,000 ರೂ.ಗಳವರೆಗೆ ರಿಯಾಯಿತಿ ನೀಡುತ್ತಿದೆ. ಇದು 15,000 ರೂ.ವರೆಗಿನ ನಗದು ರಿಯಾಯಿತಿ, 20,000 ರೂ. ವರೆಗಿನ ವಿನಿಮಯ ಬೋನಸ್, 4000 ರೂ. ವರೆಗಿನ ಕಾರ್ಪೊರೇಟ್ ರಿಯಾಯಿತಿ ಮತ್ತು 5,000 ರೂ. ವರೆಗೆ ಹೆಚ್ಚುವರಿ ಕೊಡುಗೆಗಳನ್ನು ಒಳಗೊಂಡಿದೆ. ಈ ಎಸ್‌ಯುವಿಯ ಬೆಲೆ  ರೂ 7.96 ಲಕ್ಷದಿಂದ ರೂ. 13.46 ಲಕ್ಷದವರೆಗೆ ಇರುತ್ತದೆ. 

3 /6

ಮಹೀಂದ್ರ ಮರಾಜೋದಲ್ಲಿ (Mahindra Marazzo) ಒಟ್ಟು 25,200 ರೂಗಳವರೆಗೆ ರಿಯಾಯಿತಿ ಇದೆ. ಇದು ರೂ. 20,000 ನಗದು ರಿಯಾಯಿತಿ ಮತ್ತು ರೂ. 5,200 ವರೆಗಿನ ಹೆಚ್ಚುವರಿ ಕೊಡುಗೆಗಳನ್ನು ಒಳಗೊಂಡಿದೆ. ಈ ಪ್ರಚಂಡ ವಾಹನದ ಬೆಲೆ ರೂ. 12.42 ಲಕ್ಷದಿಂದ ರೂ. 14.57 ಲಕ್ಷದವರೆಗೆ ಇರುತ್ತದೆ.  ಇದನ್ನೂ ಓದಿ- ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಮೂಲಕ ಹೊಸ ಕ್ರಾಂತಿ ಮಾಡಲು ಹೊರಟ ಟಾಟಾ ಮೋಟಾರ್ಸ್..!

4 /6

ಮಹೀಂದ್ರ ಕೆಯುವಿ 100 ಎನ್ಎಕ್ಸ್‌ಟಿಯ (Mahindra KUV100 NXT) ಮೇಲೆ ಒಟ್ಟು 41,055 ರೂ. ರಿಯಾಯಿತಿ ನೀಡಲಾಗುತ್ತಿದೆ. ಇದರಲ್ಲಿ ರೂ .38,055 ನಗದು ರಿಯಾಯಿತಿ ಮತ್ತು ರೂ. 3,000 ವರೆಗಿನ ಕಾರ್ಪೊರೇಟ್ ರಿಯಾಯಿತಿ ಸೇರಿದೆ. ಕಾರಿನಲ್ಲಿ ಯಾವುದೇ ವಿನಿಮಯ ಬೋನಸ್ ಲಭ್ಯವಿರುವುದಿಲ್ಲ. ಈ ಐಷಾರಾಮಿ ಕಾರು ಅನೇಕ ಜನರ ಬಜೆಟ್ ನಲ್ಲಿ ಲಭ್ಯವಾಗಲಿದೆ. ಆಟೋ ಮಾರುಕಟ್ಟೆಯಲ್ಲಿ ಇದರ ಬೆಲೆ 6.09 ಲಕ್ಷದಿಂದ 7.82 ಲಕ್ಷದವರೆಗೆ ಇರುತ್ತದೆ.

5 /6

ಮಹೀಂದ್ರ ಬೊಲೆರೊ (Mahindra Bolero) ವಾಹನದ ಮೇಲೆ ಕೇವಲ ರೂ .3000 ಕಾರ್ಪೊರೇಟ್ ರಿಯಾಯಿತಿ ಮಾತ್ರ ಲಭ್ಯವಿದೆ. ಈ ಎಸ್‌ಯುವಿಯ ಬೆಲೆ ರೂ. 8.72 ಲಕ್ಷದಿಂದ ರೂ. 9.70 ಲಕ್ಷದವರೆಗೆ ಇರುತ್ತದೆ.  ಇದನ್ನೂ ಓದಿ- HOME LOAN LATEST - ಕನಸಿನ ಮನೆ ಖರೀದಿ, ವಾಹನ ಖರೀದಿಗೆ ಬಡ್ಡಿ ದರಗಳನ್ನು ಇಳಿಕೆ ಮಾಡಿದ ಈ ಸರ್ಕಾರಿ ಬ್ಯಾಂಕ್

6 /6

ಮಹೀಂದ್ರಾದ ಈ ಕಾರಿಗೆ 81,500 ರೂ. ಗಳ ಗರಿಷ್ಠ ರಿಯಾಯಿತಿ ನೀಡುತ್ತಿದೆ. ಇದು ರೂ. 50,000 ವರೆಗಿನ ವಿನಿಮಯ ಬೋನಸ್, ರೂ. 11,500 ವರೆಗಿನ ಕಾರ್ಪೊರೇಟ್ ರಿಯಾಯಿತಿ ಮತ್ತು ರೂ. 20,000 ವರೆಗಿನ ಹೆಚ್ಚುವರಿ ಕೊಡುಗೆಗಳನ್ನು ಒಳಗೊಂಡಿದೆ. ಆದಾಗ್ಯೂ, ಈ ವಾಹನವು ಬಹುಶಃ ಮಧ್ಯಮ ವರ್ಗದ ಬಜೆಟ್ ವ್ಯಾಪ್ತಿಯಿಂದ ಹೊರಗಿದೆ. ವಾಸ್ತವವಾಗಿ, ಈ ಎಸ್‌ಯುವಿಯ ಬೆಲೆ ರೂ 28.77 ಲಕ್ಷದಿಂದ ರೂ. 31.77 ಲಕ್ಷದವರೆಗೆ ಇರುತ್ತದೆ.   ಸೂಚನೆ: (ಫೋಟೋ ಕ್ರೆಡಿಟ್: ಅಧಿಕೃತ ವೆಬ್‌ಸೈಟ್‌ನಿಂದ)